“ಕ್ಷೀರ ಕರ್ನಾಟಕ” ಹೈನುಗಾರಿಕೆಯ ನಾಡಿಮಿಡಿತ – “Ksheera Karnataka” The pulse of dairy farming

ಭಾರತದಲ್ಲಿ ಹೈನುಗಾರಿಕೆ ಕೇವಲ ಒಂದು ಕೃಷಿ ಚಟುವಟಿಕೆಯಲ್ಲ, ಬದಲಿಗೆ ಕೋಟ್ಯಂತರ ರೈತರ ಜೀವನೋಪಾಯ ಮತ್ತು ದೇಶದ ಆರ್ಥಿಕತೆಯ ಬೆನ್ನೆಲುಬು. ಇದು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ, ಆದಾಯ ವೃದ್ಧಿ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

“ಕ್ಷೀರ ಕರ್ನಾಟಕ” ಆನ್‌ಲೈನ್‌ ಮಾಧ್ಯಮ: ಕರ್ನಾಟಕದಲ್ಲಿ ಹೈನುಗಾರಿಕೆ ಕೇವಲ ಒಂದು ಕೃಷಿ ಚಟುವಟಿಕೆಯಾಗಿರದೆ, ಲಕ್ಷಾಂತರ ರೈತ ಕುಟುಂಬಗಳ ಜೀವನೋಪಾಯದ ಪ್ರಮುಖ ಆಧಾರವಾಗಿದೆ. ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಹೈನುಗಾರಿಕೆ ಸ್ಥಿರ ಆದಾಯದ ಮೂಲವಾಗಿದೆ. ಈ ನಿಟ್ಟಿನಲ್ಲಿ”ಕ್ಷೀರ ಕರ್ನಾಟಕ” ಆನ್‌ಲೈನ್‌ ಮಾಧ್ಯಮವು ಕರ್ನಾಟಕ ರಾಜ್ಯದಲ್ಲಿ ಹೈನುಗಾರಿಕೆ ಮತ್ತು ಹಾಲು ಉತ್ಪಾದನಾ ವಲಯದ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ರೂಪಿಸಲಾದ ಒಂದು ಮಹತ್ವಾಕಾಂಕ್ಷೆಯ ಡಿಜಿಟಲ್ ಮಾಧ್ಯಮವಾಗಿದೆ. ರಾಜ್ಯದ ಆರ್ಥಿಕತೆಯಲ್ಲಿ ಹೈನುಗಾರಿಕೆ ವಲಯದ ಪಾತ್ರವನ್ನು ಹೆಚ್ಚಿಸುವುದು, ರೈತರ ಆದಾಯವನ್ನು ವೃದ್ಧಿಸುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬಗ್ಗೆ ಜಾಗೃತಿ ಮೂಡಿಸಿ ಕರ್ನಾಟಕದ ಹೈನುಗಾರಿಕೆ ವಲಯಕ್ಕೆ ಒಂದು ಹೊಸ ದಿಕ್ಕನ್ನು ನೀಡುವ ನಿಟ್ಟಿನಲ್ಲಿ ನಿಮ್ಮೇಲ್ಲರ ಸಹಕಾರವನ್ನು ಕೋರುತ್ತಾ ನಾವು ಹೆಜ್ಜೆಯಿಟ್ಟಿದ್ದೇವೆ. “ಕ್ಷೀರ ಕರ್ನಾಟಕ” ಆನ್‌ಲೈನ್‌ ಮಾಧ್ಯಮವನ್ನು ಹರಸಿ  ಹಾರೈಸಿ.

 

 

ಹಂಚಿಕೊಳ್ಳಿ

Leave a Reply

Your email address will not be published. Required fields are marked *